2024 ರ ರಿಯಾಸಿ ದಾಳಿಯು ಇದು ಹಿಂದೂ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿಯಾಗಿದ್ದು, 9 ಜೂನ್ 2024 ರಂದು ಸಂಭವಿಸಿದೆ, ಭಯೋತ್ಪಾದಕರು ಹಿಂದೂ ಯಾತ್ರಿಕರು ಶಿವ ಖೋರಿ ಗುಹೆಯಿಂದ ಕತ್ರಾ, ರಿಯಾಸಿಗೆ ಬಸ್ಸಿನಲ್ಲಿ ಸಾಗಿತಿದ್ದಾಗ ಹೊಂಚು ಹಾಕಿ, ಸಂಚು ಮಾಡಿ ದಾಳಿ ಮಾಡೆದರು. ದಾಳಿಯಲ್ಲಿ ಬಸ್ಸು ಅಪಘಾತಕ್ಕೆ ಕಾರಣವಾಯಿತು. ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಹೆಚ್ಚುವರಿ 33 ಮಂದಿ ಗಾಯಗೊಂಡಿದ್ದಾರೆ. == ದಾಳಿ == 9 ಜೂನ್ 2024 ರಂದು ಸರಿಸುಮಾರು ಬೆ 6:15 ಕ್ಕೆ, ತೆರ್ಯಾತ್ ಗ್ರಾಮದಲ್ಲಿ ಹಿಂದೂ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ 53 ಆಸನಗಳ ಪ್ರಯಾಣಿಕ ಬಸ್ಸಿನ ಮೇಲೆ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ಉಗ್ರಗಾಮಿಗಳು 25 ರಿಂದ 30 ಗುಂಡುಗಳನ್ನು ಮನಬಂದಂತೆ ಹಾರಿಸಿದರು. ಚಾಲಕ ಗುಂಡೇಟಿನಿಂದ ಗಯಗೊಂಡಾಗ ಬಸ್ಸು ನಿಯಂತ್ರಣ ಕಳೆದುಕೊಂಡು ಕಮರಿಗೆ ಜಾರಿತು. ಒಂದು ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಗಾಯಗೊಂಡಿದ್ದಾರೆ. ಹಲವಾರು ಯಾತ್ರಿಗಳಿಗೆ ಗುಂಡೇಟಿನ ಗಾಯಗಳಾಗಿದ್ದು, ಸ್ಥಳದಲ್ಲಿ ಖಾಲಿ ಕ್ಯಾರ್ಟ್ರಿಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ಗುಂಪು ದಾಳಿಯ ಜವಾಬ್ದಾರಿಯನ್ನು ವಹಿಸಿಕೂಂಡಿಲ್ಲ. ಆದಾಗ್ಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಅಭಿಯಾನಗಳನ್ನು ನಡೆಸುವ ಇಸ್ಲಾಮಿಕ್ ಉಗ್ರಗಾಮಿಗಳು ಹಿಂದೂಗಳ ವಿರುದ್ಧ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. ದಾಳಿಯ ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಮಯದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮಿಲಿಟರಿ ಹೆಲಿಕಾಪ್ಟರ್ ಅನ್ನು ಸಹಾಯಕ್ಕೆ ರವಾನಿಸಲಾಯಿತು. ಬದುಕುಳಿದವರಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪೊಲೀಸರು ದಾಳಿಕೋರರಿಗಾಗಿ ಶೋಧ ಆರಂಭಿಸಿದ್ದಾರೆ. == ಸಹ ನೋಡಿ == 2017 ಅಮರನಾಥ ಯಾತ್ರೆ ದಾಳಿ 2023 ರಜೌರಿ ದಾಳಿಗಳು ಭಾರತದಲ್ಲಿ ಭಯೋತ್ಪಾದಕ ಘಟನೆಗಳ ಪಟ್ಟಿ == ಉಲ್ಲೇಖಗಳು ==